ಟೈಗನ್ ಎಸ್‌ಯುವಿ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ ಫೋಕ್ಸ್‌ವ್ಯಾಗನ್ | ವಿವರಣೆ ಹಾಗೂ ಇನ್ನಿತರ ವಿವರಗಳು

2021-05-31 7,653

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಟೈಗನ್ ಎಸ್‌ಯುವಿಯನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿದೆ. ಈ ವಿಷಯವನ್ನು ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಆಶಿಶ್ ಗುಪ್ತಾ ದೃಢ ಪಡಿಸಿದ್ದಾರೆ.

ಟೈಗನ್ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷ ಗಳಾಗುವ ಸಾಧ್ಯತೆಗಳಿವೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು.

ಇವುಗಳಲ್ಲಿ 1 ಲೀಟರ್ ಎಂಜಿನ್ 5500 ಆರ್‌ಪಿಎಂನಲ್ಲಿ 108 ಬಿ‌ಹೆಚ್‌ಪಿ ಪವರ್ ಹಾಗೂ 1750 ಆರ್‌ಪಿಎಂನಲ್ಲಿ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ಆಟೋಮ್ಯಾಟಿಕ್ ಆಗಿ ಜೋಡಿಸಲಾಗುತ್ತದೆ.

ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires